೨೦೧೨ರ ಸಂಚಿಕೆಯಿಂದ

ಕಾಯ್ದು ನೋಡಿ…

೨೦೧೧ ರ ಸಂಚಿಕೆಯಿಂದ

ಅಲೆ ೧ – ಡೆಬಿಯನ್ ಲಿನಕ್ಸ್ – ಒಂದು ನಂಟು
ರವಿಶಂಕರ್ ಹರನಾಥ್

ಪದವಿ ಶಿಕ್ಷಣವನ್ನು ಮುಗಿಸಿದ ಸಮಯ. ಉದ್ಯೋಗಕ್ಕಾಗಿ ಹುಡುಕಾಟ ಶುರುವಾಗಿತ್ತು. ಹಲವರಂತೆ ನಾನೂ ಕಂಪ್ಯೂಟರ್ಗಳ ಬಳಕೆಯ ಕಡೆ ಗಮನ ಹರಿಸತೋಡಗಿದೆ. ಮೊದಮೊದಲಿಗೆ Microsoft ನ ವಿಂಡೋಸ್ ಬಳಸುತ್ತಿದ್ದೆನಾದರೂ, ಕ್ರಮೇಣ ಅದರಲ್ಲಿನ ತಾಪತ್ರಯಗಳು ದಿನೇದಿನೇ ಹೆಚ್ಚಾಗಿ, ಹುಚ್ಚುಹಿಡಿಸಹತ್ತಿದವು. ಒಂದು ತಂತ್ರಾಂಶ ಬೇಕೆಂದರೆ, ಅದರ ಲೈಸೆನ್ಸ್ ಇಲ್ಲದಿದ್ದರೆ, ಅವರಿವರ ಬಳಿ ನಕಲಿ ಪ್ರತಿಗಳಿಗಾಗಿ ಹುಡುಕಾಟ, ಅವುಗಳ ಬಳಕೆಯ ಕಿರಿಕಿರಿ ಈ ಎಲ್ಲದರಿಂದ ಬೇಸತ್ತಿದ್ದ ಹೊತ್ತಿನಲ್ಲಿ, ಮುಕ್ತ ತಂತ್ರಾಂಶದ ಜಗತ್ತು ನನಗೆ ಪರಿಚಯವಾಗತೊಡಗಿತು. ಅದರಲ್ಲಿ ಮೊತ್ತ ಮೊದಲದಾಗಿ ತಿಳಿದಿದ್ದು ಗ್ನೂ/ಲಿನಕ್ಸ್ ಎಂಬ ಮುಕ್ತ ಆಪರೇಟಿಂಗ್ ಸಿಸ್ಟಮ್.

ಮುಂದೆ ಓದಿ…

ಅಲೆ ೨ – ಕ್ಯಾಥೆಡ್ರಲ್ ಅಂಡ್ ಬಜಾರ್
ಮೊದ್ಮಣಿ ಮಂಜುನಾಥ್

ಮುಕ್ತ ತಂತ್ರಾಂಶ ಜನಪ್ರಿಯವಾಗುತ್ತಿರುವ ಈ ಸಮಯದಲ್ಲಿ ಮುಕ್ತ ತಂತ್ರಾಂಶವೆಂದರೇನೆಂಬುದನ್ನು ಅರಿತುಕೊಂಡರಷ್ಟೇ ಸಾಲದು. ಮುಕ್ತ ತಂತ್ರಾಂಶದ ಬೆಳವಣಿಗೆ ಅಭಿವೃದ್ಧಿಯ ರೀತಿಗೂ, ಇತರೆ ತಂತ್ರಾಂಶಗಳ ಅಭಿವೃಧ್ಧಿಯ ರೀತಿಗೂ ಇರುವ ವ್ಯತ್ಯಾಸಗಳನ್ನೂ ತಿಳಿದುಕೊಳ್ಳಬೇಕು. ಅದು ಮುಕ್ತ ತಂತ್ರಾಂಶವನ್ನು ನಾವು ಬಳಸಬೇಕೇ ಬೇಡವೇ ಎನ್ನುವ ನಿರ್ಧಾರ ತೆಗೆದುಕೊಳ್ಳುವಲ್ಲಿನ ಮೊದಲ ಹೆಜ್ಜೆ. ಏಕೆಂದರೆ, ಇದು ತಂತ್ರಾಂಶಗಳ ನಿಖರತೆ, ಸಾಧ್ಯತೆ, ಮತ್ತು ಬಳಕೆಯ ಯೋಗ್ಯತೆಗಳ ಬಗೆಗಿನ ಮಾಪನವನ್ನು ಉಪಯೋಗಿಸಲು, ಮೂಲಭೂತ ಅವಶ್ಯಕತೆಯಾಗಿದೆ. ಮುಕ್ತತಂತ್ರಾಂಶವಾದಿಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿರುವ ಎರಿಕ್ ಸ್ಟೀವನ್ ರೇಮಾಂಡ್, ಇದರ ಬೆಳವಣಿಗೆಯ ರೀತಿಯನ್ನು ತನ್ನದೇ ಆದ fetchmail ಪ್ರಾಜೆಕ್ಟಿನಲ್ಲಿ ಉಪಯೋಗಿಸಿಕೊಂಡು, ಆ ಅನುಭವದಿಂದ ಬರೆದ ಮೂವತ್ತೈದು ಪುಟಗಳಷ್ಟಿರುವ ಒಂದು ಸುಂದರ ಪುಸ್ತಕ “ಕ್ಯಾಥೆಡ್ರಲ್ ಅಂಡ್ ಬಜಾರ್”. ನಾನಿಲ್ಲಿ ಈ ಪುಸ್ತಕದಲ್ಲಿ ಅವನು ಹೇಳಿರುವ ಪಾಠಗಳನ್ನು ಕನ್ನಡಕ್ಕೆ ಅನುವಾದ ಮಾಡಲು ಯತ್ನಿಸಿದ್ದೇನೆ.

ಮುಂದೆ ಓದಿ…

ಅಲೆ ೩ – ಕಿಟಕಿಯಿಂದ…. ಮುಕ್ತ ಜಗತ್ತಿಗೆ ಮೊದಲ ಹೆಜ್ಜೆ

ವಿಜಯ್ ಕುಮಾರ್ ಎಂ

ಭಾರತದಲ್ಲಿ ಅನೇಕ ಮಂದಿ Windows OS ಉಪಯೋಗಿಸುವವರಿದ್ದಾರೆ. ಆದರೆ ಪರವಾನಗಿ ಹೊಂದಿದ ತಂತ್ರಾಂಶ ಮತ್ತು OS ಉಪಯೊಗಿಸುವುದು ಬಹುಮಂದಿಗೆ ದುಬಾರಿ, ಅಂತದರಲ್ಲೂ ಅವರಿಗೆ ಕಡ್ಡಾಯವಾಗಿ Windows ಉಪಯೋಗಿಸಲೇ ಬೇಕಾಗುತ್ತದೆ. ಆಫೀಸಲ್ಲಿ ಉಪಯೋಗಿಸುವ Windows ಮತ್ತು ಅವಲಂಬಿತ ತಂತ್ರಾಂಶಗಳು, ಇಂತ ಅನಿವಾರ್ಯತೆಗಳಲ್ಲಿ ಒಂದು. ನಮ್ಮ ಸುತ್ತಲಿನ ಜನರು, ಹಾಗು Linux (ಅಥವಾ ಬೇರೆ OS) ಬಗೆಗಿನ ಅಲ್ಪ ತಿಳುವಳಿಕೆ ನಮ್ಮ ಅನಿವಾರ್ಯತೆಗಳಿಗೆ ಇನ್ನೂ ಒತ್ತುಕೊಡುತ್ತವೆ. ಇಂತ ಸನ್ನಿವೇಶದಲ್ಲೂ ಜನರು ದಿನನಿತ್ಯ ಬೇರೆ ಬೇರೆ ತಂತ್ರಾಂಶಗಳಿಗೆ ಹುಡುಕಾಟ ನೆಡೆಸುತ್ತಾರೆ. ಅಲ್ಲಿ ಕೂಡ ಉಚಿತವಾಗಿ ದೊರಕುವುದಕ್ಕೆ ಆದ್ಯತೆ.

ಮುಂದೆ ಓದಿ…

ಅಲೆ ೪ – ಫೈರ್ಫಾಕ್ಸ್ – ಮುಕ್ತ ತಂತ್ರಾಂಶದ ಮುಕುಟ

ಸುನಿಲ್ ಜಯಪ್ರಕಾಶ್

ದೂರವಾಣಿಯ ನಂತರ ಇಂದು ಜಗತ್ತಿನಲ್ಲಿ ನಾವೆಲ್ಲಿದ್ದರೂ ನಮ್ಮವರೊಡನೆ ಸಂಪರ್ಕದಲ್ಲಿರುವಂತೆ ಸಾಧ್ಯವಾಗಿಸಿದ್ದು ಇಂಟರ್ನೆಟ್ ಅಥವಾ ಅಂತರ್ಜಾಲ. ನಮ್ಮೆಲ್ಲರ ಮತ್ತಷ್ಟು ಅಗತ್ಯಗಳನ್ನು ಪೂರೈಸುವಂತೆ ಮಾಡಿದ್ದು ಇದೇ ಇಂಟರ್ನೆಟ್. ಇಂದು ಇಂಟರ್ನೆಟ್ ಜನಸಾಮಾನ್ಯರಿಗೂ ಎಟುಕುವಂತಾಗಿದ್ದು ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರೆ ತಪ್ಪಾಗಲಾರದು.

ಮುಂದೆ ಓದಿ…

ಅಲೆ ೫ – ಸುರಕ್ಷೆಯ ಅಲೆ – ವೈಯಕ್ತಿಕ ಗಣಕತಂತ್ರಗಳ ಸುರಕ್ಷೆಯ ಮಾರ್ಗದರ್ಶಿ

ಪವಿತ್ರ ಹೆಚ್

ಗಣಕಯಂತ್ರ ಹಾಗೂ ಮಾಹಿತಿ ತಂತ್ರಜ್ನಾನದ ಅಲೆಗಳು ಎಲ್ಲಾ ವರ್ಗದ ಜನರ ತಲುಪಿದಂತೆ, ಅದರ ಸುರಕ್ಷೆಯ ಬಗೆಗಿನ ಅರಿವು ಎಲ್ಲರನ್ನು ತಲುಪಿಲ್ಲ. ಗಣಕಯಂತ್ರ ನಮ್ಮ ದಿನನಿತ್ಯದ ಬೇಕು ಬೇಡಗಳನ್ನು ಸುಲಭವಾಗಿ ಪೂರೈಸುವುದರ ಜೊತೆಗೆ, ಅದರ ಸುರಕ್ಷೆಯ ಕೊರತೆಯಿಂದಾಗಿ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಬೇರೆಯವರಿಗೆ ರವಾನಿಸುತ್ತಿದೆ. ತಂತ್ರಜ್ನಾನವು ಬೆಳೆದಂತೆ ಮುಖ್ಯಮಾಹಿತಿಗಳನ್ನು ಅಕ್ರಮವಾಗಿ ಸಂಪಾದಿಸುವ ಜನರು ಹಾಗು ಅದಕ್ಕೆ ಸಹಾಯಕಾರಿಯಾಗುವ ತಂತ್ರಾಂಶಗಳು ಮೂಡುತ್ತಿವೆ. ಇವೆಲ್ಲದಕ್ಕು ಕಡಿವಾಣ ಹಾಕಲು ಹಾಗು ನಿಮ್ಮ ವೈಯಕ್ತಿಕ ಗಣಕತಂತ್ರಗಳ ರಕ್ಷಿಸಲು ಸಹಾಯವಾಗುವ ಕೆಲವು ಮಾರ್ಗಗಳನ್ನು ಹಂಚಿಕ್ಕೊಳ್ಳುವುದು ಈ ಅಲೆಯ ಉದ್ದೇಶ.

ಮುಂದೆ ಓದಿ…

ಅಲೆ ೬ – ತಂತ್ರಾಂಶ ಅಭಿವೃದ್ಧಿಯ ಮಜಲುಗಳು- ಸಾಫ್ಟ್ ವೇರ್ ಬೆಳವಣಿಗೆಯ ಹಾದಿ

ಎಂ.ಕೆ. ರೇಖಾವಿಜೇಂದ್ರ

ಆಧುನಿಕ ಜೀವನ ಶೈಲಿಯಲ್ಲಿ ನಾವೆಲ್ಲರೂ ಒಂದಲ್ಲಾ ಒಂದು ರೀತಿ ತಂತ್ರಾಂಶದ ಮೇಲೆ ಅವಲಂಭಿಸಿರುತ್ತೇವೆ. ನಮಗೆ ಅರಿವೇ ಇಲ್ಲದೆ ನಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ಸಾಫ್ಟ್ ವೇರ್ ನ ಬಳಕೆಯಾಗುತ್ತಿದೆ. ಇದು ಕೇವಲ ಐ.ಟಿ ಉದ್ಯೋಗಸ್ತರು ಮಾತ್ರವಲ್ಲದೆ ಜನಸಾಮಾನ್ಯರು ಸಹ ಬಳಸುತ್ತಿದ್ದಾರೆ. ಹೇಗಂತೀರಾ ??? ಒಮ್ಮೆ ನಮ್ಮ ಸುತ್ತ ಮುತ್ತ ಕಣ್ಣು ಹಾಯಿಸೋಣ! ಶಾಪಿಂಗ್ ಮಾಲ್, ರೆಸ್ಟೋರೆಂಟ್, ಕಚೇರಿ, ಬಸ್-ಟ್ರೈನ್ ಕಾಯ್ದಿರಿಸುವ ಕೌಂಟರ್, ಹೀಗಿಯೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಾಫ್ಟ್ ವೇರ್ ನ ಬಳಕೆಗೆ ದೇವಸ್ಥಾನಗಳೂ ಹೊರತಲ್ಲ.

ಮುಂದೆ ಓದಿ…

ಅಲೆ ೭ – ಕನ್ನಡಕ್ಕೆ OCR! ಇದು ಸಾಧ್ಯವೇ?

ಹಳ್ಳಿಮನೆ ಅರವಿಂದ

Optical Character Recognision ಅಂದರೆ ಏನು? ಚಿತ್ರದಲ್ಲಿ ಇರುವ ಅಕ್ಷರಗಳನ್ನು ಗುರುತಿಸಿ, ಅವುಗಳನ್ನು ನಿಜವಾದ ಅಕ್ಷರಗಳಂತೆ ಬದಲಾಯಿಸುವುದು. ನಿಜವಾದ ಅಕ್ಷರಗಳಿದ್ದರೆ, ಅವುಗಳಿಂದ ಬೇಕಾದ ಪದಗಳನ್ನಷ್ಟೇ ಕತ್ತರಿಸಬಹುದು, ಬಣ್ಣ ಬದಲಾಯಿಸಬಹುದು ಹಾಗೂ ಕೆಲವು ಪದ/ವಾಕ್ಯಗಳನ್ನಷ್ಟೇ ಬದಲಾಯಿಸಬಹುದು. ಅದೇ ಚಿತ್ರದ ರೂಪದಲ್ಲಿದ್ದರೆ ಇದು ಸಾಧ್ಯವಿಲ್ಲ, ಎಲ್ಲವನ್ನೂ ಪುನಃ ಬರೆಯಬೇಕಾಗುತ್ತದೆ. OCR ಈಗಾಗಲೇ ಇಂಗ್ಲಿಷ್ ಭಾಷೆಗೆ ಇದ್ದರೆ, ಕನ್ನಡಕ್ಕೆ ಏಕಿಲ್ಲ, ಅದನ್ನು ಮಾಡಬಹುದೇ? ಈ ಲೇಖನದ ಮೂಲಕ OCR ಕೆಲಸ ಮಾಡುವ ಬಗೆ ಮತ್ತು ಈಗಿರುವ ತೊಂದರೆಗಳ ಬಗ್ಗೆ ತಿಳಿದುಕೊಳ್ಳೋಣ.

ಮುಂದೆ ಓದಿ…

ಅಲೆ ೮ – ಅನಂತ ಸಾಧ್ಯತೆಗಳ ಹೆಬ್ಬಾಗಿಲು: ಮುಕ್ತ ತಂತ್ರಾಂಶಗಳು

ಪ್ರಸನ್ನ ಎಸ್ ಪಿ

ಕಂಪ್ಯೂಟರ್ ಇರುವುದು ಕೇವಲ ಗೇಮ್ಸ್ ಆಡುವುದಕ್ಕೆ ಎಂದು ತಿಳಿದಿದ್ದ ನನಗೆ ಅದರ ಅಗಾಧ ಸಾಧ್ಯತೆಗಳ ಹೆಬ್ಬಾಗಿನ್ನು ತೆರೆದಿಟ್ಟಿದ್ದೇ ಮುಕ್ತ ತಂತ್ರಾಂಶಗಳು. ಮುಕ್ತ ತಂತ್ರಾಂಶಗಳಿಲ್ಲದಿದ್ದರೆ ಇಂದು ತಂತ್ರಜ್ಞಾನವು ಖಂಡಿತಾ ಇಷ್ಟೊಂದು ಮುಂದುವರೆಯುತ್ತಿರಲಿಲ್ಲ. ಮುಕ್ತ ತಂತ್ರಾಂಶದ ಆಕರಗಳು(source code) ಎಲ್ಲರಿಗೂ ಮುಕ್ತವಾಗಿರುವುದರಿಂದ ಪ್ರತಿಯೊಬ್ಬರಿಗೂ ತಂತ್ರಾಂಶದ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸಬಹುದು. ಮುಕ್ತ ತಂತ್ರಾಂಶಗಳು ಅತ್ಯಂತ ವೇಗವಾಗಿ ಹಾಗೂ ಹೆಚ್ಚು ಸಮರ್ಥವಾಗಿ ಬೆಳೆಯುವುದಕ್ಕೆ ಇದೇ ಕಾರಣ. ಇಂತಹ ಉದಾತ್ತ ಕಲ್ಪನೆಯನ್ನು ಮುಕ್ತ ತಂತ್ರಾಂಶಗಳ ಹೊರತಾಗಿ ಬೇರಡೆ ಕಾಣಲು ಸಾಧ್ಯವಿಲ್ಲ.

ಮುಂದೆ ಓದಿ…

ಅಲೆ ೯ – ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಮತ್ತು ನಾವು

ಓಂಶಿವಪ್ರಕಾಶ್ ಎಚ್.ಎಲ್

ಕ್ಲಿಕ್ ಕ್ಲಿಕ್ – ಮೌಸ್ ಜೊತೆಗೆ ಆಟ ಆಡುತ್ತಾ ಕಂಪ್ಯೂಟರಿನ ಪರದೆಯ ಮೇಲೆ ಚಿತ್ರವಿಚಿತ್ರಗಳನ್ನು ಸೃಷ್ಟಿಸುವುದು ಇತ್ಯಾದಿ ಸಾಮಾನ್ಯನಿಗೂ ಅತಿಸಾಮಾನ್ಯ ಅನಿಸತೊಡಗಿದೆ. ಎಲ್ಲರಿಗೂ ತಾವು ಕೈನಲ್ಲಿಡಿದಿರುವ ಒಂದು ಸಣ್ಣ ಫೋನ್ ಕೂಡ ಕಂಪ್ಯೂಟರ್ ಎಂಬುದರ ಅರಿವು ಇಲ್ಲದಿಲ್ಲ. ಕಂಪ್ಯೂಟರ್ ಎಂಬ ಈ ಯಂತ್ರ ಹುಟ್ಟಿದ್ದು, ಬೆಳೆದು ಬಂದ ದಾರಿ, ಅದು ಕೆಲಸ ಮಾಡುವ ಧಾಟಿ, ಬೆಳೆದು ಬಂದ ಹಾದಿ ಹೇಗೆ? ಯಾರು? ಮುಂದೆ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ನಮಗೆ ನಾವು ಕೇಳುತ್ತಾ ಹೋದರೆ ರೋಚಕ ಅನ್ವೇಷಣೆಗಳ/ಆವಿಷ್ಕಾರಗಳ ಕಥಾಬಂಡಾರ ನಮ್ಮ ಮುಂದೆ ಸರಿಯುತ್ತಾ ಹೋಗುತ್ತದೆ.

ಮುಂದೆ ಓದಿ…

ಅಲೆ ೧೦ – ಗಿಂಪ್ – ಮುಕ್ತ ಚಿತ್ರ ಸಂಸ್ಕರಣಾ ತಂತ್ರಾಂಶ

ಶಂಕರ್ ಪ್ರಸಾದ್. ಎಮ್ ವಿ

ಉಚಿತ ಹಾಗು ಮುಕ್ತ ಆಕರ ತಂತ್ರಾಂಶವು ವ್ಯಾವಹಾರಿಕ(ಕಮರ್ಶಿಯಲ್) ತಂತ್ರಾಂಶದಷ್ಟು ಸಶಕ್ತವೆ? ಆಶ್ಚರ್ಯವೆನಿಸಿದರೂ ಇದು ಸತ್ಯ! Bind, Sendmail, ಅಥವ Perl ಇಲ್ಲದೆ ಇಂದಿನ ಅಂತರಜಾಲ(ಇಂಟರ್ನೆಟ್) ಕಾರ್ಯನಿರ್ವಹಿಸಲು ಸಾಧ್ಯವೆ ಇಲ್ಲ. ಲಿನಕ್ಸ್ ಈಗಾಗಲೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಹಾಗು ವ್ಯವಹಾರಗಳಲ್ಲಿ ಮಹತ್ತರ ಕೊಡುಗೆ ನೀಡಿದೆ. ಮೋಝಿಲ್ಲಾದ ಫೈರ್ಫಾಕ್ಸಿನಲ್ಲಿರುವ ಸೌಲಭ್ಯಗಳು ಹಾಗು ಅದರ ದೃಢತೆಯಿಂದಾಗಿ ದಿನದಿಂದ ದಿನಕ್ಕೆ ಪ್ರಖ್ಯಾತಗೊಳ್ಳುತ್ತಾ ಹೋಗುತ್ತಿದೆ. ಇಂತಹ ಉಪಯುಕ್ತವಾದ ಮುಕ್ತ ಹಾಗು ಉಚಿತವಾಗಿ ಜಾಗತಿಕವಾಗಿ ಎಲ್ಲೆಡೆಯಲ್ಲಿಯೂ ಸಹ ಲಭ್ಯವಿರುವ ತಂತ್ರಾಂಶ ಉಪಕರಣಗಳಲ್ಲಿ ಗಿಂಪ್ ಸಹ ಒಂದು.

ಮುಂದೆ ಓದಿ…

ಅಲೆ ೧೧ – ಮುಕ್ತ ತಂತ್ರಾಂಶಕ್ಕೆ ಆಗಸವೇ ಎಲ್ಲೆ!

ಹಂಸಾನಂದಿ

ಮೊನ್ನೆ ನನ್ನ ಇಮೆಯ್ಲ್ ನಲ್ಲಿ ಮಿತ್ರರೊಬ್ಬರು ನನಗೆ ಹೀಗೆ ಬರೆದಿದ್ದರು: “ನೀವು ಬರೆದಿದ್ದ ಅರುಂಧತೀ ದರ್ಶನ ಬರಹ ಚೆನ್ನಾಗಿತ್ತು. ನೀವು ಬೆಂಗಳೂರಿನಲ್ಲಿ ಈ ನಕ್ಷತ್ರವನ್ನು ನೋಡಲು ಅನುಕೂಲವಾಗುವ ಹಾಗೆ ಸೂಚನೆಗಳನ್ನು ಕೊಟ್ಟಿದ್ದಿರಿ. ಈ ನಕ್ಷತ್ರ ನಾವಿರುವ ಕ್ಯಾಲಿಫೋರ್ನಿಯಾದ ಸನಿವೇಲ್ ನಲ್ಲೂ ಕಾಣುತ್ತದೆಯೇ ಇಲ್ಲವೇ? ಕಾಣುವುದಿದ್ದರೆ ಹೇಗೆ ತಿಳಿಸುತ್ತೀರಾ?”. ಈ ಪ್ರಶ್ನೆ ನನಗೆ ಈಚಿನ ದಶಕದಲ್ಲಿ, ಸಾಮಾನ್ಯ ನೋಡುಗನಿಗಾಗಿ ಸಿಕ್ಕಿರುವ ಆಕಾಶ ವೀಕ್ಷಣೆಯ ಹೊಸ ದಾರಿಯನ್ನ ಮನಸ್ಸಿಗೆ ನೆನಪಿಸಿತು. ನಾನು ನಿಜವಾಗಿ ತಂತ್ರಾಂಶ ತಂತ್ರಜ್ಞನೇನಲ್ಲ, ಆದರೂ ಈ ಅರಿವಿನ ಅಲೆಗಳು ಸರಣಿಯಲ್ಲಿ ಒಂದು ಮುಕ್ತ ತಂತ್ರಾಂಶದ ಬಗ್ಗೆ ಒಬ್ಬ ಬಳಕೆದಾರನ ನೋಟದಿಂದ ಬರೆಯಲು ಈ ಪ್ರಶ್ನೆ ಕಾರಣವಾಗಿ, ನಾನು ಬಳಸಿರುವ ಒಂದು ಮುಕ್ತ ತಂತ್ರಾಂಶದ ಬಗ್ಗೆ ಬರೆಯೋಣವೆಂದು ಹೊರಟಿದ್ದೇನೆ.

ಮುಂದೆ ಓದಿ…

ಅಲೆ ೧೨ – ವಿ ಎಲ್ ಸಿ ಮೀಡಿಯಾ ಪ್ಲೇಯರ್

ಹರೀಶ್

ಪ್ರತಿಯೊಂದು ಹೊಸ ರೀತಿಯ ಫೈಲಿಗೂ ಹೊಸ ಹೊಸ ತಂತ್ರಾಂಶ ಹಾಕಿಕೊಳ್ಳುವುದು ಕಿರಿಕಿರಿಯುಂಟುಮಾಡುತ್ತಿತ್ತು. ಆದರೆ ಅದೇ ಸಮಯದಲ್ಲಿ ಇವೆಲ್ಲ ಜಂಜಾಟಗಳಿಂದ ಮುಕ್ತಿ ನೀಡುವ, ಸಾಮಾನ್ಯವಾಗಿ ಬಳಸಲ್ಪಡುವ ಬಹುತೇಕ ಫಾರ್ಮ್ಯಾಟುಗಳ ಫೈಲುಗಳನ್ನು ಪ್ಲೇ ಮಾಡಬಲ್ಲ ಚಿಕ್ಕ-ಚೊಕ್ಕ ತಂತ್ರಾಂಶವೊಂದು ಹೊರಬಂದಿತ್ತು. ಅದೂ ಮುಕ್ತ ಮತ್ತು ಸ್ವತಂತ್ರವಾಗಿ… ಅದೇ ವಿ ಎಲ್ ಸಿ ಮೀಡಿಯಾ ಪ್ಲೇಯರ್(VLC Media player). ಮೊದಲಿಗೆ ವಿಡಿಯೋಲ್ಯಾನ್ ಸರ್ವರ್ (VideoLan Server – VLS) ಮತ್ತು ವಿಡಿಯೋಲ್ಯಾನ್ ಕ್ಲೈಂಟ್ (VideoLan Client – VLC) ಎಂಬ ಎರಡು ಪ್ರತ್ಯೇಕ ಹೆಸರಿನೊಂದಿಗೆ, ಪ್ರತ್ಯೇಕ ಉದ್ದೇಶದೊಂದಿಗೆ ಪ್ರಾರಂಭವಾದ ಇದು ಮುಂದೆ ಎರಡೂ ವೈಶಿಷ್ಟ್ಯಗಳನ್ನು ಒಗ್ಗೂಡಿಸಿಕೊಂಡು ವಿ ಎಲ್ ಸಿ ಮೀಡಿಯಾ ಪ್ಲೇಯರ್ ಆಯಿತು.

ಮುಂದೆ ಓದಿ…

ಅಲೆ ೧೩ – ಯೋಜನಾ ನಿರ್ವಹಣೆ – ತಲೆ ಬಿಸಿ ಏಕೆ?

ಶ್ರೀನಿವಾಸ್ ಪಿ ಎಸ್

ಹೆಚ್ಚು-ಕಡಿಮೆ ನೀವು ಯಾವುದೇ ಕ್ಷೇತ್ರದ ಉದ್ಯೋಗದಲ್ಲಿದ್ದರೂ ಒಂದು ಪ್ರಾಜೆಕ್ಟ್ (ಯೋಜನೆ) ಸಾಮಾನ್ಯವಾಗಿ ಇದ್ದೇ ಇರುತ್ತದೆ. ಉದ್ಯೋಗವೇ ಏಕೆ, ನಿಮ್ಮದೇ ಆದ ಚೆಂದದ ಮನೆ ಕಟ್ಟ ಬೇಕೆಂದಿದ್ದರೂ ಅದಕ್ಕೊಂದು ಯೋಜನೆ ಹಾಕಲೇ ಬೇಕು. ಈ ಯೋಜನೆಗಾಗಿ ಇಂತಿಷ್ಟು ಜನಗಳು ಇರಬೇಕು, ಇಂತಿಷ್ಟು ಕೆಲಸದ ತುಣುಕುಗಳು, ಇಂತಿಂಥ ದಿನವೇ ಈ ಕಾರ್ಯಗಳು ಮುಗಿಯಬೇಕು, ಎಂಬ ಲೆಕ್ಕವನ್ನು ಪ್ರಾಜೆಕ್ಟ್ ಆರಂಭಿಸುವ ಮುನ್ನವೇ ಸಾಮಾನ್ಯವಾಗಿ ನಿರ್ಧರಿಸಲಾಗುತ್ತದೆ.

ಮುಂದೆ ಓದಿ…

ಅಲೆ ೧೪ – ನಿಮ್ಮ ಜಾಲತಾಣಕ್ಕೆ ಮುಕ್ತ ಅವಕಾಶಗಳು

ಹರ್ಷ ಪೆರ್ಲ

ಅಂತರ್ಜಾಲ ಇಂದು ಸಂವಹನ-ಮಾಹಿತಿ-ಮನರಂಜನೆಗಷ್ಟೇ ಸೀಮಿತವಾಗದೆ ಕಾರ್ಯನಿರ್ವಹಣೆಗೂ ಬಳಕೆಯಾಗುತ್ತಿದೆ. ನೀವು ಬಳಸುವ ತಂತ್ರಾಂಶಗಳನ್ನು ಗಣಕದಲ್ಲಿ ಪ್ರತಿಷ್ಠಾಪಿಸುವ ಬದಲು ಅಂತರ್ಜಾಲದ ಮೂಲಕವೇ ನಿಮ್ಮ ಕೆಲಸಗಳನ್ನು ಮಾಡಿಕೊಡುವ ತಂತ್ರಾಂಶಗಳು ವೆಬ್ ಆಪ್(web app)ಗಳಾಗಿವೆ. ಇವುಗಳು ಸರ್ವರ್ ಗಳಲ್ಲೇ ಪ್ರತಿಷ್ಠಾಪಿಸಲ್ಪಟ್ಟು, ನಾವು ನಮ್ಮ ಬ್ರೌಸರ್‍ ಗಳ ಮೂಲಕ ನೀಡುವ ಸೂಚನೆಯನ್ನು ಆಧರಿಸಿ, ಸರ್ವರ್ ಗಳಲ್ಲೇ ಸಂಸ್ಕರಣೆ ನಡೆಸಿ ಅದರ ಫಲಿತಾಂಶವನ್ನು ನಿಮಗೆ ಮರಳಿಸುವ ಕೆಲಸವನ್ನು ಮಾಡುತ್ತವೆ. ಹೆಚ್ಚುತ್ತಿರುವ ಇಂಟರ್ನೆಟ್ ವೇಗ, ಕಡಿಮೆ ಸಂಸ್ಕರಣಾ ಸಾಮರ್ಥ್ಯವುಳ್ಳ ಮೊಬೈಲ್, ಟ್ಯಾಬ್ಲೆಟ್ ಗಳ ಮೂಲಕ ಅಂತರ್ಜಾಲ ಬಳಕೆ, ಬೆಳೆಯುತ್ತಿರುವ ತಂತ್ರಾಂಶಗಳ ಅಗತ್ಯತೆಗಳು ಇವುಗಳ ಬೇಡಿಕೆ ಹೆಚ್ಚುವಂತೆ ಮಾಡಿವೆ.

ಮುಂದೆ ಓದಿ…