2012

೨೦೧೨ರ ಸಂಚಿಕೆ ಈಗ ಲಭ್ಯ

ಪ್ರತಿವರ್ಷ ನಮ್ಮಲ್ಲಿನ ಅರಿವನ್ನು ಇತರರೊಡನೆ ಹಂಚಿಕೊಳ್ಳಲು, ಮತ್ತು ಹೊಸಬರನ್ನು ವಿಜ್ಞಾನ, ತಂತ್ರಜ್ಞಾನ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬಗ್ಗೆ ಬರೆಯಲು ಪ್ರೇರೇಪಿಸುವ ನಮ್ಮ ಅರಿವಿನ ಅಲೆಗಳು ಕಾರ್ಯಕ್ರಮ, ತನ್ನ ಎರಡನೆಯ ಇ-ಪುಸ್ತಕವನ್ನು ಬಿಡುಗಡೆಗೊಳಿಸಿದೆ. ಈ ಬಾರಿ ೧೦ ಲೇಖಕರ ಬರಹಗಳು ಇದರಲ್ಲಿ ಲಭ್ಯವಿವೆ.

ನಿಮ್ಮ ಮೊಬೈಲ್ ಆಂಡ್ರಾಯ್ಡ್ ನಿಂದ ಕಾರ್ಯನಿರ್ವಹಿಸುತ್ತಿದ್ದರೆ, ೨೦೧೧ ಮತ್ತು ೨೦೧೨ ರ ಪುಸ್ತಕವನ್ನು ಮೊಬೈಲ್ ಅಥವಾ ಟ್ಯಾಬ್‌ನಲ್ಲೇ ಓದಬಹುದು.

ಲೇಖನಗಳನ್ನು ಓದಿ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಕೋರುತ್ತ…

 

 

ಅರಿವಿನ ಅಲೆಗಳು ಆಂಡ್ರಾಯ್ಡ್‌ನಲ್ಲಿ

 

ಅರಿವಿನ ಅಲೆಗಳು ೨೦೧೧ ರ ಪುಸ್ತಕವನ್ನು ಈಗ ನೀವು ಆಂಡ್ರಾಯ್ಡ್‌ನಲ್ಲಿ ಓದಬಹುದು.

ಆಂಡ್ರಾಯ್ಡ್ ಆಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು QR ಕೋಡ್ ಬಳಸಿ ಅಥವಾ ಈ ಕೊಂಡಿ ಬಳಸಿ.

ನಿಮ್ಮ ಆಂಡ್ರಾಯ್ಡ್ ಫೋನಿನ ಪ್ಲೇ ಮೂಲಕ ‘Arivina Alegalu’  ಸರ್ಚ್ ಮಾಡಿ ಆಫ್ ಇನ್ಸ್ಟಾಲ್ ಮಾಡಿಕೊಳ್ಳಿ.

 

 

ಅರಿವಿನ ಅಲೆಗಳು ೨೦೧೨

ಆತ್ಮೀಯ ಕನ್ನಡಿಗರೆ,

ಸಾಮಾನ್ಯನೂ, ದಿನನಿತ್ಯದ ಬಳಕೆದಾರನೂ ಆದ ಗೆಳೆಯನಿಂದ ಹಿಡಿದು, ಈಗಾಗಲೇ ತಂತ್ರಾಂಶ ಮತ್ತು ತಂತ್ರಜ್ಞಾನದ ಅಭಿವೃದ್ದಿ,ಅನುಸ್ಥಾಪನೆ, ಸಂಶೋಧನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಮಾನ ಮನಸ್ಕ ಗೆಳೆಯರ ಅನುಭವಗಳನ್ನು ಒಳಗೊಂಡಂತೆ ಕನ್ನಡಕ್ಕೆ ಒಂದಿಷ್ಟು ತಂತ್ರಜ್ಞಾನ ಸಂಬಂಧಿತ ಲೇಖನಗಳನ್ನು ಸೇರಿಸುವುದು ‘ಅರಿವಿನ ಅಲೆಗಳು‘ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿ ೨೦೧೧ ರ ಆಗಸ್ಟ್ ೧೫ ರಂದು ಮೊದಲ ಪ್ರಕಟಣೆ ಕಂಡಿತು.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬಳಕೆಯನ್ನು ಪ್ರಚುರಪಡಿಸುವುದು, ಅದನ್ನು ಉಪಯೋಗಿಸಲು, ಅಭಿವೃದ್ದಿಪಡಿಸಲು,ಅಭ್ಯಸಿಸಲು, ಇತರರೊಡನೆ ಹಂಚಿಕೊಳ್ಳಲು ಇಚ್ಚಿಸುವ ಹೊಸ ಬಳಕೆದಾರರಿಗೆ ಸಹಾಯವಾಗುವಂತೆ, ಕನ್ನಡದಲ್ಲಿ ಲೇಖನಗಳನ್ನು ಹೊರತರುವಲ್ಲಿ ‘ಸಂಚಯ‘ದ ಈ ಕಾರ್ಯಕ್ರಮದ ಫಲವಾಗಿ ಹೊರಬಂದ ಮೊದಲ ಆವೃತ್ತಿಯನ್ನು ನೀವುhttp://arivu.sanchaya.net ನಲ್ಲಿ ಕಾಣಬಹುದು.

೧೪ ಜನ ಕನ್ನಡಿಗರು ತಮ್ಮ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದಾರೆ. ತಂತ್ರಜ್ಞಾನ ಅಥವಾ ತಂತ್ರಾಂಶಗಳನ್ನು ಬಳಸಲು ಹಿಂಜರಿಯುವ ಸಾಮಾನ್ಯನ ಅಂಜಿಕೆಯನ್ನು ದೂರಪಡಿಸಲು ಆಗಸ್ಟ್ ೧ ರಿಂದ ಆಗಸ್ಟ್ ೧೪ ರ ವರೆಗೆ ಪ್ರತಿದಿನ ಪ್ರಕಟಿಸಿದ ಅಲೆಗಳನ್ನು ನೀವು ಓದಬಹುದು.

ಈ ಕಾರ್ಯವನ್ನು ಮತ್ತೆ ಈ ವರ್ಷವೂ ಕೈಗೆತ್ತಿಕೊಂಡಿದ್ದು, ಹೊಸ ಲೇಖಕರನ್ನು, ಲೇಖನಗಳನ್ನು ಆಹ್ವಾನಿಸುತ್ತಿದ್ದೇವೆ.

ಯಾರು ಬರೆಯಬಹುದು?

ಕನ್ನಡದಲ್ಲಿ ತಾನೂ ಬರೆಯಬಲ್ಲೆ ಎನ್ನುವ ಜನಸಾಮಾನ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ತಾಂತ್ರಿಕ ಪರಿಣಿತಿ ಹೊಂದಿರುವವರು,ಈಗಾಗಲೇ ತಂತ್ರಜ್ಞಾನ ಮತ್ತು ತಂತ್ರಾಂಶ ಅಭಿವೃದ್ದಿಯಲ್ಲಿ ತೊಡಗಿರುವವರು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಬಳಸುವ, ಪ್ರಚುರಪಡಿಸುವ ಹೀಗೆ ಯಾರು ಬೇಕಾದರೂ ಅರಿವಿನ ಅಲೆಗಳಿಗೆ ತಮ್ಮ ಲೇಖನಗಳನ್ನು ಕಳಿಸಬಹುದು.

ಏನನ್ನು ಬರೆಯುವುದು?

  • ತಂತ್ರಾಂಶ ಮತ್ತು ತಂತ್ರಜ್ಞಾನಗಳು ನಿಮ್ಮ ಜೀವನದಲ್ಲಿ ಯಾವ ಪಾತ್ರವಹಿಸಿವೆ?
  • ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಬಳಸುತ್ತಿದ್ದಲ್ಲಿ ಅಥವಾ ಬಳಸುವ ಆಸಕ್ತಿ ಇದ್ದಲ್ಲಿ ಅದರ ಬಗ್ಗೆ ನಿಮ್ಮ ಅನುಭವ,ಅನಿಸಿಕೆಗಳು ಇತ್ಯಾದಿ
  • ಸಮುದಾಯದ ಒಳಿತಿಗೆ ಬೇಕಿರುವ ತಂತ್ರಜ್ಞಾನ ಅಥವಾ ತಂತ್ರಾಂಶಗಳ ಬಗ್ಗೆ ಬೆಳಕು ಚೆಲ್ಲುವುದು ಅಥವಾ ನೀವೇನಾದರೂ ಅಂತಹ ಅಭಿವೃದ್ದಿಕಾರ್ಯದ ಮೇಲೆ ಕೆಲಸ ಮಾಡಿದ್ದರೆ ಅದರ ಪರಿಚಯ
  • ದೈನಂದಿನ ಕೆಲಸ ಕಾರ್ಯಗಳಲ್ಲಿ, ನಗರಾಭಿವೃದ್ದಿ, ಸರ್ಕಾರಿ ಮತ್ತು ಸರ್ಕಾರೇತರ ಕೆಲಸ ಕಾರ್ಯಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ತಂತ್ರಾಂಶಗಳ ಅಭಿವೃದ್ದಿಯ ಬಗ್ಗೆ
  • ಕೃತಿಸ್ವಾಮ್ಯ (Copyright), ಪೇಟೆಂಟುಗಳು, ಇಂಟರ್ನೆಟ್ ಸುರಕ್ಷತೆ, ಇಂಟರ್ನೆಟ್ ಕಾನೂನು ಇತ್ಯಾದಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವುದು ಇತ್ಯಾದಿ

ಅಥವಾ

       ’ಅರಿವಿನ ಅಲೆಗಳಲ್ಲಿ‘ ಪ್ರಕಟವಾಗಬೇಕು ಎಂದು ನಿಮಗೆ ಅನಿಸುವ ಲೇಖನಗಳನ್ನು ನಮಗೆ ಕಳುಹಿಸಿ ಕೊಡಬಹುದು.

 

ಲೇಖನಗಳನ್ನು ಕಳುಹಿಸಲು ಕಡೆಯ ದಿನಾಂಕ೨೮ನೇ ಜುಲೈ ೨೦೧೨

ಲೇಖನಗಳನು ಕಳಿಸಬೇಕಾದ ವಿಳಾಸಮಿಂಚಂಚೆ[email protected]

 

ಇದರಿಂದ ನಿಮಗೇನು ಸಿಗುತ್ತದೆ?

  • ‘ಅರಿವಿನ ಅಲೆಗಳು‘ ಆಗಸ್ಟ್ ೧೫ರಂದು ಪೂರ್ಣವಾಗಿ ಪ್ರಕಟವಾದಾಗ ಆಯ್ಕೆ ಆದ ೧೪ ಲೇಖನಗಳಲ್ಲಿ ನಿಮ್ಮ ಲೇಖನವೂ ಸೇರಬಹುದು.
  • ‘ಅರಿವಿನ ಅಲೆಗಳು‘ ಇ-ಪುಸ್ತಕದಲ್ಲಿ ಕೂಡ ನಿಮ್ಮ ಲೇಖನ ನಿಮ್ಮ ಕಿರುಪರಿಚಯದೊಂದಿಗೆ ಪ್ರಕಟವಾಗುತ್ತದೆ.
  • ಕನ್ನಡಿಗರೊಂದಿಗೆ ನಿಮ್ಮ ಜ್ಞಾನದ ಅರಿವಿನ ಅಲೆಗಳನ್ನು ಹಂಚಿಕೊಂಡ ಅನುಭವ ನಿಮಗೆ ಆಗುತ್ತದೆ.
  • ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಜನಪ್ರಿಯಗೊಳಿಸುವಲ್ಲಿ ನೀವೂ ಸಹಕರಿಸಿದಂತಾಗುತ್ತದೆ.
  • ಸಮುದಾಯ ಕಟ್ಟುವ ಕಾರ್ಯದಲ್ಲಿ, ಅದರಲ್ಲೂ ತಂತ್ರಜ್ಞಾನ ಹಾಗೂ ತಂತ್ರಾಂಶಗಳ ಜೊತೆಗೆ ಕನ್ನಡದ ಅಭಿವೃದ್ದಿಯ ಕಡೆ ಗಮನ ಹರಿಸಲು ಅನೇಕರನ್ನು ಪ್ರೇರೇಪಿಸಿದಂತಾಗುತ್ತದೆ.
  • ನೀವು ಮತ್ತು ಇತರರು ಬರೆದ ಲೇಖನಗಳನ್ನು, ಅನುಭವಗಳನ್ನು ಮತ್ತಷ್ಟು ಸ್ನೇಹಿತರೊಡನೆ ಹಂಚಿಕೊಳ್ಳುವ ಸ್ವಾತಂತ್ರ್ಯ.
  • ನಿಮ್ಮ ಭಾಗವಹಿಸುವಿಕೆಯ ಮುಖೇನ ಸ್ವತಂತ್ರೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಸಂತೋಷ, ಸಂಭ್ರಮ

 

ನಿಮಗೆ ಇದರಿಂದ ಏನು ದೊರೆಯುವುದಿಲ್ಲ?

  • ಹಣ/ಬಹುಮಾನ ಇತ್ಯಾದಿ ಅಳೆಯಲಾಗುವಂತಹವುಗಳು, ಏಕೆಂದರೆ ಈ ಕಾರ್ಯಕ್ರಮಕ್ಕೆ ಆರ್ಥಿಕ ಉದ್ದೇಶಗಳು ಮತ್ತು ಬೆಂಬಲ ಇಲ್ಲ.
  • ಲೇಖನ ಅಥವಾ ಇ-ಪುಸ್ತಕದ ಮುದ್ರಿತ ಪ್ರತಿ – ಅರ್ಥಿಕತೆಯ ದೃಷ್ಟಿ ಇಂದ (ಮೇಲೆ ಹೇಳಿದಂತೆ) ಮತ್ತು ಮುದ್ರಿಸುವುದು ಉತ್ತಮವೇ ಎಂಬ ಪ್ರಶ್ನೆಗೆ ನಾವುಗಳಿನ್ನೂ ಉತ್ತರವನ್ನು ಪಡೆಯದೇ ಇರುವುದರಿಂದ.
  • ಇತರೆ ನಮ್ಮ ಗಮನಕ್ಕೆ ಬರದ ಅಂಶಗಳು;)

 

ಈ ಕಾರ್ಯಕ್ರಮದ ಸ್ಪೂರ್ತಿ

Phpadvent.org ಎನ್ನುವ ವೆಬ್ ಸೈಟ್. ಕ್ರಿಸ್ಮಸ್ ಆಚರಿಸುವ ಸಲುವಾಗಿ ಡಿಸೆಂಬರ್ ೧ ರಿಂದ ೨೪ ರವರೆಗೆ PHP ಎಂಬ ತಂತ್ರಾಂಶದ ಬಗೆಗಿನ ಲೇಖನಗಳನ್ನು ತಂತ್ರಜ್ಞರು ಬರೆದು ಹಂಚಿಕೊಳ್ಳುತ್ತಾರೆ.

 

ಸಂಚಯದ ಬಗ್ಗೆ

“ಸಂಚಯ” (http://sanchaya.net) – ಹೆಸರೇ ಸೂಚಿಸುವಂತೆ ಇದೊಂದು, ಕನ್ನಡ ಭಾಷೆಯ ಕುರಿತಾದ ಮುಕ್ತ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಗಳನ್ನು ಒಂದೆಡೆ ತರುವ ಪ್ರಯತ್ನ. ಭಾರತ ದೇಶದಲ್ಲಿ, ಹಿಂದಿ, ತಮಿಳು, ಬಂಗಾಳಿ ಹೀಗೆ ಬಹಳಷ್ಟು ಅಧಿಕೃತ ಭಾಷೆಗಳನ್ನು, ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಳಸಲು ಯೋಗ್ಯವಾಗುವಂತೆ, ಹತ್ತು ಹಲವು ಬಗೆಯ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಹಾಗೂ ಸರ್ಕಾರದ ಕಾರ್ಯಗಳಿಗೂ ಹೊಂದುವಂತೆ ರೂಪುಗೊಂಡಿವೆ,ಅಭಿವೃದ್ಧಿಯ ಪಥದಲ್ಲಿಯೂ ಸಾಗುತ್ತಿವೆ. ಅವುಗಳಂತೆಯೇ ಅಧಿಕೃತ ಭಾಷೆಯಾದ ಕನ್ನಡದಲ್ಲಿ ನಡೆಯುತ್ತಿರುವ,ನಡೆಸಬಹುದಾದ ಮುಕ್ತ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ, ಅಭಿವೃದ್ಧಿಗಾರರಿಗೆ ಒಂದು ಮುಕ್ತ ವೇದಿಕೆಯನ್ನು ಒದಗಿಸುವುದು ‘ಸಂಚಯ’ದ ಆಶಯ. ಯಾವುದೇ ಒಂದು ಭಾಷೆಯ ಸುತ್ತಲಿನ ತಂತ್ರಾಂಶ ಅಥವಾ ತಂತ್ರಜ್ಞಾನ ಅಭಿವೃದ್ದಿಯು ಆ ಭಾಷೆಯ ಅಭಿವೃದ್ದಿಯೇ ಆಗಿರುತ್ತದೆ. ಈ ಕೆಲಸ ಜನಸಾಮಾನ್ಯನಿಂದ ಇಡಿದು ತಂತ್ರಜ್ಞಾನ ನಿಪುಣರೂ, ಉದ್ಯಮಿಗಳು,ಸರ್ಕಾರ ಹಾಗೂ ಸರ್ಕಾರೇತರ ಸಂಘಸಂಸ್ಥೆಗಳು ಎಲ್ಲರ ಒಗ್ಗಟ್ಟನ್ನು ಬಯಸುತ್ತದೆ. ಕನ್ನಡಿಗರು ಈ ಕಾರ್ಯದಲ್ಲಿ ಒಟ್ಟಾಗುತ್ತಾರೆ ಎಂಬ ನಂಬಿಕೆಯೊಂದಿಗೆ.

ಹಕ್ಕುಗಳುಹಂಚಿಕೆ

ಎಲ್ಲ ಲೇಖನಗಳ ಸಂಪೂರ್ಣ ಹಕ್ಕುಗಳು ಲೇಖಕರದ್ದೇ ಆಗಿರುತ್ತವೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅರಿವನ್ನು ಕನ್ನಡಿಗರಲ್ಲಿ ಪಸರಿಸಲು ಒಟ್ಟುಗೊಂಡ ಲೇಖಕರು, ಎಲ್ಲ ಲೇಖನಗಳನ್ನು ಮುಕ್ತವಾಗಿ ಕನ್ನಡಿಗರೊಂದಿಗೆ ಹಂಚಿಕೊಳ್ಳ ಬಯಸಿರುತ್ತಾರೆ. ಅರಿವಿನ ಅಲೆಗಳು ಸಂಗ್ರಹದ ಲೇಖನಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿ ಬಿಡುಗಡೆಗೊಳಿಸಲಾಗುವುದು. ಈ ಮುಖೇನ ಲೇಖನವನ್ನು ಅರಿವಿನ ಅಲೆಗಳು ಮತ್ತು ಸಂಚಯದ ಉಲ್ಲೇಖದೊಡನೆ,ಲೇಖಕರ ಹೆಸರು ಹಾಗೂ ಪರಿಚಯದೊಂದಿಗೆ, ಯಾವುದೇ ಬದಲಾವಣೆಗಳಿಲ್ಲದೆ, ವಾಣಿಜ್ಯ ಉದ್ದೇಶ ರಹಿತ ಜ್ಞಾನದ ಹಂಚಿಕೆಗೆ ಮಾತ್ರ ಬಳಸಬಹುದಾಗಿದೆ. ಸಂಚಿಕೆಗಳು ಅಥವಾ ಇದರ ಲೇಖನಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಯೋಜನೆ ಇರುವ ವ್ಯಕ್ತಿಗಳು, ಸಂಘ ಸಂಸ್ಥೆಗಳು, ಮುದ್ರಣಾಲಯ, ಪ್ರಕಾಶಕರು ಇತ್ಯಾದಿ ಮೊದಲು arivu AT sanchaya.net ಗೆ ಮಿಂಚಂಚೆ ಕಳುಹಿಸಿ ನಮ್ಮ ಒಪ್ಪಿಗೆ ಪಡೆದು ನಂತರವೇ ಮುಂದುವರೆಯ ತಕ್ಕದ್ದು.

ಅರಿವಿನ ಅಲೆಗಳು – ಪಿ.ಡಿ.ಎಫ್ , ಇ-ಪಬ್ ಇತರೆ ಇ-ಸಂಚಿಕೆಗಳನ್ನು ಮುದ್ರಿಸುವಾಗ, ಇತರರೊಡನೆ ಹಂಚಿಕೊಳ್ಳುವಾಗ ಯಾವುದೇ ರೀತಿಯ ಬದಲಾವಣೆಯನ್ನು ಮಾಡದಿರಿ.

ಅರಿವಿನ ಅಲೆಗಳು | Arivina Alegalu by ಸಂಚಯ | Sanchaya is licensed under a Creative Commons Attribution-NonCommercial-NoDerivs 3.0 Unported License. Permissions beyond the scope of this license may be available at http://arivu.sanchaya.net/license

 

ನಮ್ಮನ್ನು ಸಂಪರ್ಕಿಸಲು:-

ಅಂತರ್ಜಾಲ ತಾಣಗಳು:-

http://sanchaya.net | http://arivu.sanchaya.net | http://hejje.sanchaya.net

ಮೊದಲ ಆವೃತ್ತಿ:- http://arivu.sanchaya.net/ebook/arivina-alegalu.pdf

 

ಪರವಾಗಿ, 

ಅರಿವಿನ ಅಲೆಗಳು ತಂಡ

ಸಂಚಯ

2011

Dear Friends,

We friends here in Karnataka celebrated Independence day publishing waves of knowledge shared by many FOSS enthusiasts, users, technicians for over 14 days (From August 1st to August 14th) as ‘Arivina Alegalu’ (Waves of knowledge). On 15th August all these articles were bundled in an eBook under Creative Commons CC-by-SA-NA license and shared with the world to reach out to others.
Please visit http://arivu.sanchaya.net for reading more about our work and also to find the eBook.
We seek your help to spread the word about this work and encourage more people to write articles about Free Software & Technology in Kannada.
You can reach the team to appreciate, comment and to give feedback at arivu AT sanchaya.net
Special Note:- Inspiration for this work – PHPAdvent.org – Our Special Thanks.
More about this activity can be read on other blog links given below :-

2. http://platonic.techfiz.info/2011/06/28/arivina-alegalu/

3. ಅರಿವಿನ ಅಲೆಗಳು | ಲಿನಕ್ಸಾಯಣ 

On Press
1. FOSS in Kannada, for dummies on The Hindu